Assignment 9

        

 

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಡಪಳ್ಳಿ ತಾಂಡಾ  ತಾ : ಔರಾದ ( ಬಾ  )        

ಅಸೈನ್ಮೆಂಟ್-9

ಶಿಕ್ಷಕರ ಹೆಸರು  :    ಶ್ರೀ ಚಂದ್ರಕಾಂತ                                                                ವಿಷಯ : ವೃತ್ತಿ ನೈಪುಣ್ಯತೆ ಹೆಚ್ಚಿಸುವ ಬಗ್ಗೆ

ಸದರಿ ಮನೆಯಿಂದಲೇ ಕೆಲಸದಡಿಯಲ್ಲಿ ನಮ್ಮ ವೃತ್ತಿ , ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತಂತೆ 400 ಪದಗಳ ಲೇಖನ

 

ವೃತ್ತಿನೈಪುಣ್ಯತೆ ಹೆಚ್ಚಿಸಿಕೊಳ್ಳುವ ಬಗ್ಗೆ

 

                                                                        “ ಗುರೂಪದೇಶ ಮಂತ್ರ ವೈದ್ಯ

          ಜಂಗಮೂಪದೇಶ ಶಸ್ತ್ರ ವೈದ್ಯ ನೋಡಾ

       ಭವ ರೋಗವ ಕಳೆವ ಪರಿಯ ನೋಡಾ

                                                                          ಕೂಡಲಸಂಗನ ಶರಣರ ಅನುಭಾವ

                                                                          ಮಡಿವಾಳನ ಕಾಯಕದಂತೆ ”

 

                 ಎಂಬ ಶರಣರ ವಾಣಿಯಂತೆ ಸತತ ಕಾಯಕದಲ್ಲಿ ತೊಡಗುವಂತೆ ಶಿಕ್ಷಕರಾದ ನಾವುಗಳು  ಸತತ ಸತ್ಯ ಶುದ್ದ ಕಾಯಕದಲ್ಲಿ ತೊಡಗಬೇಕು.ಇಲ್ಲಿ ಶಿಕ್ಷಕರ ಅನುಭಾವ ನಿಂತ ನೀರಾಗಬಾರದು ಅದು ಸತತವಾಗಿ ಹರಿಯುವ ಚಿಲುಮೆಯಂತೆ ಇರಬೇಕು.ಶಿಕ್ಷಕರು ಯಾವಾಗಲೂ ಕ್ರಿಯಾಶೀಲರಾಗಬೇಕುಅವನು ಯಾವಾಗಲೂ ಅಭ್ಯಾಸದಲ್ಲಿ ತೊಡಗಬೇಕುಶಿಕ್ಷಕನು ಹೊಂದಿರುವ ಕೌಶಲಅನುಭವ ಮತ್ತು ವತ೯ನೆಗಳ ಮೂಲಕ ಬೋಧನಾ ಕಲಿಕೆಯ ವಾತಾವರಣವನ್ನು ಪರಿಣಾಮಕಾರಿಯನ್ನಾಗಿಸುವಉತ್ತಮ ಫಲಿತಾಂಶದ ಉತ್ಪಾದಕದೊಂದಿಗೆ ತನ್ನ ಮತ್ತು ವಿದ್ಯಾಥಿ೯ಗಳ ಸಂಪೂಣ೯ ಸಾಮಥ್ಯ೯ವನ್ನು ಅರಿವುದರ ಜೊತೆಗೆ ಶಿಕ್ಷಣದ ಗುರಿಗಳನ್ನು ಸಾಧಿಸಲು ಸಹಾಯಕವಾಗುವ ಅಂಶಗಳೇ ಶಿಕ್ಷಕನ ಸಾಮಥ್ಯ೯ಗಳು.

 

                 ಶಿಕ್ಷಕರು ನಿಧಿ೯ಷ್ಟ ಸಂದಭ೯ದಲ್ಲಿ ನಿಧಿ೯ಷ್ಟ ಕಾಯ೯ವನ್ನು ಉನ್ನತ ಮಟ್ಟದ ಶ್ರೇಷ್ಠತೆಯೊಂದಿಗೆ ಪೂಣ೯ಗೊಳಿಸಲು ಬೇಕಾಗಿರುವ ಜ್ಷಾನಕೌಶಲ,ವತ೯ನೆ ಮತ್ತು ಅನುಭವಗಳನ್ನೊಳಗೊಂಡ ಗುಚ್ಛವೇ ಶಿಕ್ಷಕರ ಸಾಮಥ್ಯ೯.

 

     ಹಾಗಾಗಿ 2020-2021ನೇ ಶೈಕ್ಷಣಿಕ ವಷ೯ದ ಜೂನ ಮಾಹೆಯಲ್ಲಿ ಪ್ರಾರಂಭವಾಗಬೇಕಾದ ಶಾಲೆಗಳು ಕೋವಿಡ್-19‌ ಸೋಂಕಿನ ತೀವ್ರತೆಯಿಂದ ( ಮಹಾಮಾರಿಯಿಂದ ) ಶಾಲೆಗಳು ಪ್ರಾರಂಭವಾಗಿಲ್ಲ.ಇಂತಹ ಸಂಧಿಗ್ದ ಸಮಯದಲ್ಲಿ ಶಿಕ್ಷಕರ ಕತ೯ವ್ಯಕ್ಕೆ ಚ್ಯುತಿ ಬಾರದಂತೆ ಹಾಗೂ ಅವರ ವೃತ್ತಿ ನೈಪುಣ್ಯತೆ ಹೆಚ್ಚಿಸುವ ಸಲುವಾಗಿ ನಮ್ಮ ಕಲಬುಗಿ೯ಯ ಆಪರ ಆಯುಕ್ತರು   ಶಿಕ್ಷಕರಿಗೆ  ಹತ್ತು ಅಸೈನ್ಮೆಂಟುಗಳನ್ನು ನೀಡಿರುತ್ತಾರೆಅವುಗಳಲ್ಲಿ ಅಸೈನ್ಮೆಂಟು-9  ಶಿಕ್ಷಕರು ಸದರಿ ಮನೆಯಲ್ಲಿಯೇ ಕೆಲಸದಡಿಯಲ್ಲಿ  ವೃತ್ತಿ ನೈಪುಣ್ಯತೆ   ಹೆಚ್ಚಿಸುವ ಸಲುವಾಗಿ ಕೊಟ್ಟಿರುವ 400 ಪದಗಳ ಒಂದು ಲೇಖನದ ಚಟುವಟಿಕೆಗಳಲ್ಲಿ ಒಂದು.

 

          ಈ ಕೋವಿಡ್-19‌ ಮಹಾಮಾರಿಯಿಂದಾಗಿ ನಾನು ಮನೆಯಿಂದ ಹೊರಗೆ ಹೋಗದೆ ನಮ್ಮ ವೃತ್ತಿ ನೈಪುಣ್ಯತೆ  ಹೆಚ್ಚಿಸಿ ಕೊಳ್ಳಲು ಆಪರ ಆಯುಕ್ತರು ವಿನೂತನ ಪ್ರಯೋಗದ ಮುಖಾಂತರ  ಆನ್ಲೈನ್‌ ತರಬೇತಿಯನ್ನು ಹಮ್ಮಿಕೊಳ್ಳಲು ಸೂಚಿಸಿರುವುದು ನಮ್ಮ ಶಿಕ್ಷಕ ಸಮುದಾಯಕ್ಕೆ ಸಂತೋಷದ ಸಂಗತಿಏಕೇಂದರೆ ನಾನು ವೈಯಕ್ತಿಕವಾಗಿ ಹೇಳುವುದೇನೆಂರೆ ಮನೆಯಲ್ಲಿ ಕುಳಿತು ಟೀಮ್‌ ಆಪ್‌ ಮುಖಾಂತರ  ನಲಿ-ಕಲಿ ತರಬೇತಿ ಪಡೆದಿರುತ್ತೇನೆ .ಈ ತರಬೇತಿಯಲ್ಲಿ ನಲಿ-ಕಲಿಯಲ್ಲಿ ಪರೀಷ್ಕರಣೆಗೊಂಡ ಮಾಹಿತಿ ಹಾಗೂ ತರಗತಿಯ ನಿವ೯ಹಣೆ ಮತ್ತು ಮಕ್ಕಳನ್ನು ಕಲಿಕೆಗೆ  ಹೇಗೆ ಸಿದ್ದಗೊಳಿಸಬೇಕು ಜೊತೆಗೆ ಇನ್ನು ಹಲವಾರು ಮಾಹಿತಿಗಳನ್ನು ಪಡೆದುಕೊಂಡಿರುತ್ತೇನೆ ಅದಲ್ಲದೇ ಇಂಗ್ಲೀಷನಲ್ಲಿ ಕಲಿ-ನಲಿ ಹೇಗೆ ಬೋಧಿಸಬೇಕು ,ಮುಂತಾದ ವಿಷಯಗಳನ್ನು ತಿಳಿದು ಕೊಂಡಿರತ್ತೇನೆ.

          

                ಆಮೇಲೆ ಇನ್ನೊಂದು ಸಂಗತಿ ಎಂದರೆ ನನಗೆ ಅಂಡ್ರಾಯ್ಡ ಫೋನ್‌ ನಲ್ಲಿ ಯುಟೂಬ್‌ ಬಳಸಿ ಉತ್ತಮ ಹಾಗೂ ಶ್ರೇಷ್ಠ ಶಿಕ್ಷಣ ಹಿತ ಚಿಂತಕರಾದ  ಡಾಗುರುರಾಜ ಕರಜಗಿಯವರ ಪ್ರೇರಣಾ ವಿಚಾರಗಳು  ಮತ್ತು ಶಾಲಾ ಬ್ಲಾಗ್‌ ಓಪನ್‌ ಮಾಡುವುದುಶಾಲಾ ಬ್ಲಾಗ್  ನಲ್ಲಿ ಅಸೈನ್ಮೆಂಟುಗಳನ್ನು ಅಪ್ ಲೋಡ್‌ ಮಾಡುವ ಬಗ್ಗೆ  ಇಮೇಲ್‌ ಬಳಸಿ ವಿಷಯಗಳನ್ನು ಹಂಚಿಕೊಳ್ಳವುದು ಮುಂತಾದ ಅನುಭವಗಳನ್ನು ಪಡೆದಿರುತ್ತೇನೆ.

 

                      

 

                          ಮನೆಯಲ್ಲಿಯೇ ಕುಳಿತು ಪಾಠಕ್ಕೆ ಸಂಬಂಧಿಸಿದಂತೆ  ಹಲವಾರು ಪಾಠೋಪಕರಣಗಳು ಕೂಡ ಸಿದ್ಧಪಡಿಸಿಕೊಳ್ಳುತ್ತಿದ್ದೇನೆ.

 

 

                ʼʼ ನಿಮ್ಮ ಕನಸು ನನಸಾಗುವ ಮೊದಲು ,ನೀವು ಕನಸು ಕಾಣಬೇಕು ʼʼ ಎಂಬ ಅಬ್ದುಲ್‌ ಕಲಾಂ ರವರ  ವಾಣಿಯಂತೆ ನನ್ನಕನಸಿನ ಶಾಲೆಯು ಹೇಗಿರಬೇಕು ಅದಕ್ಕಾಗಿ ನಾನೇನು ಮಾಡಬಲ್ಲೆ ಎಂದು ಯೋಚಿಸಿ  ಶಾಲೆಯ ಅಭಿವೃದ್ಧಿಗಾಗಿ ಎಸ್.ಡಿ.ಪಿ , ಎಸ್..ಪಿ ಹಾಗೂ ಶೈಕ್ಷಣಿಕ ವಷ೯ದ ಮಿಷನ್‌ ಮತ್ತು ಗುರಿಗಳನ್ನು ಮನೆಯಿಂದಲೇ ತಯಾರಿಸಿ ನನ್ನ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಂಡಿರುತ್ತೇನೆ .

          

                                                                 

 

                                                                                                                  ಶ್ರೀ ಚಂದ್ರಕಾಂತ ಗಂದಿಗುಡೆ

                                                                                                                                                           ಪ್ರಭಾರಿ ಮುಖ್ಯಗುರುಗಳು

                                                                                                                    .ಕಿ.ಪ್ರಾ.ಶಾಲೆ ಗುಡಪಳ್ಳಿತಾಂಡಾ

 

 

 

 

 

 

Comments